ಫಕೀರನ ಫಿಲ್ಮೀ ದುನಿಯಾ

ಫಕೀರನ ಫಿಲ್ಮೀ ದುನಿಯಾ

ಜೀವನ ಚರಿತ್ರೆ
Apr 2025
ಇದು ಭಾರತದ ಅಪರೂಪದ ಚಿಂತಕ ಕೆ.ಎ ಅಬ್ಬಾಸ್‌ರನ್ನು ಆಧರಿಸಿದ ಕೃತಿ. 1915 ರಿಂದ 1948 ರವರೆಗೆ ಬೀಸಿದ ಗಾಂಧೀ ವಿಚಾರಧಾರೆಯ ಬಿರುಗಾಳಿಯಲ್ಲಿ, 1930ರ ಸುಮಾರಿಗೆ ಆಗಮಿಸಿದ ಕಮ್ಯುನಿಸ್ಟ್ ಚಿಂತನೆಗಳಲ್ಲಿ, 1936 ಕ್ಕೆ ಬೆಳೆದ ಸಾಹಿತ್ಯ ಲೋಕದ ಪ್ರಗತಿಶೀಲ ಬರಹಗಳಲ್ಲಿ, ಎರಡು ಮಹಾಯುದ್ಧಗಳ ಕಾಲದಲ್ಲಿ ಸಿಡಿದೆದ್ದ ಪತ್ರಿಕಾ ರಂಗದ ಕ್ರಾಂತಿಕಾರಿ ಪುಟಗಳಲ್ಲಿ ಹಾಗೂ ಇಂಗ್ಲಿಷ್, ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಬರೆದ ಸುಮಾರು 86 ಕ್ಕೂ ಮೀರಿದ ಅವರ ಕತೆ, ಕಾದಂಬರಿ, ಪ್ರವಾಸ-ಸಾಹಿತ್ಯ, ಅಂಕಣ ಹಾಗೂ ಜೀವನ ಚರಿತ್ರೆಗಳಲ್ಲಿ ಬೆಳೆದು ನಿಂತ ಅಬ್ಬಾಸ್ ಎಂಬ ಹಿರಿಯ ಚೇತನ ಕುರಿತು ಒಂದು ಪುಸ್ತಕ ಅಥವಾ ಒಂದು ಪುಟ್ಟ ಲೇಖನದಲ್ಲಿ ಕಲೆ ಹಾಕುವುದು ಅಸಾಧ್ಯವಾದ ಮಾತು, ಆದರೆ ಅದು ಇಲ್ಲಿ ಸಾಧ್ಯವಾಗಿದೆ.