ಪರದೇಶಿ ಫಿಲ್ಮೀ ಪಯಣ ನಾಡಿನ ಖ್ಯಾತ ವಿಮರ್ಶಕರಾದ ಪ್ರೊ. ಜಿ.ಎಸ್. ಅಮೂರರು ಹಾಗೂ ಪ್ರೊ. ತಿ.ನಂ. ನಾರಾಯಣರ ಬೆನ್ನುಡಿಯೊಂದಿಗೆ ಪ್ರಕಟವಾದ ಮಹತ್ವದ ಕೃತಿ. ಬಹುಮುಖ ಪ್ರತಿಭೆಯ ಕೆ.ಎ. ಅಬ್ಬಾಸರ ಬಗೆಗೆ ಕನ್ನಡದಲ್ಲಿ ಬರಹಗಳು ವಿರಳ, ಶ್ರೀ ಹ.ಮಾ. ನಾಯಕ್ ಹಾಗೂ ಸಂತೋಷ್ ಕುಮಾರ್ ಗುಲ್ವಾಡಿ ಅವರನ್ನು ಹೊರತು ಪಡಿಸಿದರೆ ನೆನಪಾಗುವ ಮತ್ತೊಂದು ಹೆಸರು ಪ್ರೊ. ಪಂಚಾಕ್ಷರಿ ಹಿರೇಮಠ ಅವರ ನಂತರ ಅಬ್ಬಾಸರ ಕುರಿತು ವಿಸ್ತ್ರತವಾದ ಸಾಹಿತ್ಯವನ್ನು ಕನ್ನಡದಲ್ಲಿ ತಂದವರು ರಾಗಂ, ಹಿಂದಿ ಚಲನಚಿತ್ರರಂಗದ ಘಟಾನುಘಟಿಗಳಾದ ಪೃಥ್ವಿರಾಜ್ ಕಪೂರ್, ರಾಜಕಪೂರ್, ದಿಲೀಪ್ ಕುಮಾರ್, ಅಮಿತಾ ಬಚ್ಚನ್, ಶಬಾನಾ ಆಜ್ಯ, ಸೆಮಿ ಗರೆವಾಲ್, ಕುಂದನ್ ಲಾಲ್ ಸೈಗಲ್, ಬಲರಾಜ್ ಸಹಾನಿ, ದೇವಾನಂದ, ಶಮಿಕಪೂರ್, ಧರಮೇಂದ್ರ ಸಂಜೀವ ಕುಮಾರ್, ಮಧುಬಾಲಾ ಹಾಗೂ ಮೀನಾ ಕುಮಾರಿಯನ್ನು ಕುರಿತ ಮಹತ್ವದ ಲೇಖನಗಳು ಈ ಕೃತಿಯಲ್ಲಿ ಇವೆ. ಭಾರತೀಯ ಚಲನಚಿತ್ರದ ಇತಿಹಾಸದ ಬಂಗಾರದ ಪುಟಗಳನ್ನು ನೆನಪಿಸುವ ಅಪರೂಪದ ಪುಸ್ತಕ.