ಶೀರ್ಷಿಕೆಯಷ್ಟೇ ಸಮರ್ಥವಾದ ಬರಹವಿದು. 2006 ರಿಂದ 2009 ರವರೆಗೆ ಎರಡು ಮುದ್ರಣಗಳನ್ನು ಕಂಡಿದ್ದ ಓಶೋ ಬದುಕು ಬರಹ ಮತ್ತು ಅಲೆಮಾರಿತನವನ್ನು ಕುರಿತಾದ ರಾಗಂ ಅವರ ಈ ಬರಹ 2011 ರಲ್ಲಿ ಸಚಿತ್ರ ಸಮೇತವಾಗಿ ಮೂರನೇಯ ಮುದ್ರಣವನ್ನು ಕಾಣುತ್ತದೆ. ಇದುವರೆಗೂ ಕೇವಲ 99 ಪುಟಗಳವರೆಗೆ ಮಾತ್ರ ಸೀಮಿತವಾಗಿದ್ದ ಓಶೋ ಸಾಹಿತ್ಯ ಈ ಕೃತಿಯಲ್ಲಿ 190 ಪುಟಗಳ ವ್ಯಾಪ್ತಿಯನ್ನು ಪಡೆದು ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತದೆ. ಮಂಗಳೂರಿನ ಪುಸ್ತಕ ಮಳಿಗೆಗಳಲ್ಲಿ ಅತಿ ಹೆಚ್ಚು ಮಾರಾಟಗೊಂಡ ರಾಗಂ ಅವರ ಈ ಕೃತಿ ಅವರ ವ್ಯಕ್ತಿತ್ವಕ್ಕೆ ಭಿನ್ನ ಆಯಾಮವನ್ನು ಒದಗಿಸುತ್ತದೆ. ಗೋವಿಂದರಾಜು ಲಕ್ಷ್ಮೀಪುರ ಅವರ ಬೆನ್ನುಡಿ, ಚಂಪಾ ಅವರ ಮುನ್ನುಡಿ ಇರುವ ಈ ಕೃತಿಯಲ್ಲಿ ಗಮನಿಸಲೇಬೇಕಾದ ಬಂಡಾಯದ ಕವಿ ಚಂಪಾ ಅವರ ಮಹತ್ವದ ಸಾಲುಗಳಿವೆ .