ಡಾ. ರಾಜಶೇಖರ ಮಠಪತಿ (ರಾಗಂ) ರವರ 'ಗಾಂಧಿ-ಅಂತಿಮ ದಿನಗಳು' ಮತ್ತು 'ಗಾಂಧಿ ಮುಗಿಯದ ಅಧ್ಯಾಯ' ಕೃತಿಗಳು ಗಾಂಧೀಜಿಯನ್ನು ಕೇಂದ್ರವಾಗಿರಿಸಿಕೊಂಡು, ಭಾರತ ಸ್ವಾತಂತ್ರ್ಯದ ಆಸುಪಾಸಿನ ಘಟನಾವಳಿಗಳ ಹಿನ್ನೋಟವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಕುರಿತ ಹಲವಾರು ಕೃತಿಗಳನ್ನು ಓದಿ, ಅರಗಿಸಿಕೊಂಡು ಸಂಯೋಜಿಸಲ್ಪಟ್ಟ ಸದರಿ ಎರಡೂ ಕೃತಿಗಳು ಗಾಂಧೀಜಿಯ ಉತ್ತರಾರ್ಧ ಬಾಳಿನ ಭಾವ ಸಂಗ್ರಹವಾದರೂ ನವೀನ ತಾರ್ಕಿಕ ಸ್ಪರ್ಶವು ರಾಗಂರನ್ನು ಹಾಗೂ ಕೃತಿಯನ್ನು ಸಾಹಿತ್ಯ ಇತಿಹಾಸದಲ್ಲಿ ಭದ್ರವಾದ ನೆಲೆಯಲ್ಲಿ ನಿಲ್ಲಿಸಿವೆ.