ದಿಗಂಬರವೇ ದಿವ್ಯಾಂಬರ

ದಿಗಂಬರವೇ ದಿವ್ಯಾಂಬರ

ಜೀವನ ಚರಿತ್ರೆ
Apr 2025
'ದಿಗಂಬರವೇ ದಿವ್ಯಾಂಬರ ಕೃತಿಯು ಕೂಡ ರಾಗಂ ಅವರ ಓಶೋ ಕುರಿತು ಬರೆದ ಹಿಂದಿನ ಪುಸ್ತಕದ ವಿಸ್ತಾರವಾಗಿದೆ. ರಜನೀಶ್ ದೊಡ್ಡ ಸಂಸಾರವನೇ ಬದುಕಿದರು. ಎಲ್ಲ ಧರ್ಮ ಪ್ರವರ್ತಕರ ಕುರಿತು ಮಾತನಾಡುತ್ತಲೇ ಎಲ್ಲವನ್ನು, ಎಲ್ಲರನ್ನೂ ಧಿಕ್ಕರಿಸುವ ಎದೆಗಾರಿಕೆಯನ್ನು ಮೆರೆದವರು. ಕಾಮ ಗೆದ್ದವ ಪ್ರೇಮ ಉಳಿಸಿಕೊಳ್ಳುತ್ತಾನೆ, ಒಲಿಸಿಯುಕೊಳ್ಳುತ್ತ ನ ಪ್ರೇಮವುಳ್ಳ ಮನಸ್ಸಿನವ ಮಾತ್ರ ಮನುಷ್ಯನಾಗುತ್ತಾನೆ ಎಂದು, ಅತ್ಯಂತ ಸರಳ ಮಾನವತವಾದ ಮಂಡಿಸಿದ ಭಾರತದ ವಿವಾದಿತ ಮನುಷ್ಯ ಓಶೋ, ಪಾಠ ಹೇಳುವುದು ಬಿಟ್ಟು ಸ್ಥಾವರ ಬದುಕಿಗೆ ತಿಲಾಂಜಲಿ ಒಡ್ಡಿ ಜಂಗಮನಾಗಿ ಅಂಡಲೆದವ ಇಂತಹ ಓಶೋ ಕುರಿತು ರಾಗಂ ಬರೆದಿರುವ ದಿಗಂಬರವೇ ದಿವ್ಯಾಂಬರ' ಮುದ್ರಣ ಸೊಗಸಿನಲ್ಲಿಯೂ ಕೂಡ ತನ್ನ ಶ್ರೇಷ್ಠತೆಯನ್ನು ಮೆರೆದಿದೆ.