ಸಾಹಿತ್ಯ-ಸಂಸ್ಕೃತಿ ಮತ್ತು ಪರಿಸರ

ಸಾಹಿತ್ಯ-ಸಂಸ್ಕೃತಿ ಮತ್ತು ಪರಿಸರ

ಭಾಷಾಂತರ
Apr 2025
ಮನುಷ್ಯ ಕೇಂದ್ರವಾಗಿದ್ದ ರಾಗಂರ ಬರಹ ಈ ಕೃತಿಯ ಮೂಲಕ ಸಂಸ್ಕೃತಿ ಚಿಂತನೆ ಮತ್ತು ಪರಿಸರ ಚಿಂತನದ ಕಡೆ ಗಮನ ಹರಿಸುತ್ತದೆ. ಇದು ಭಾಷಾಂತರ ಕೃತಿಯಾಗಿದ್ದು ವಿಲಿಯಂ ಫಾಕ್ಟರ್, ರವೀಂದ್ರನಾಥ ಟ್ಯಾಗೋರ್, ಜಗದೀಶ್ ಚಂದ್ರ ಬೋಸ್, ಸಿ.ವಿ ರಾಮನ್, ಡಯಾನ ರಂಥ ಮಹತ್ವದ ಚಿಂತಕರ ಆಲೋಚನೆಗಳನ್ನು ಇದು ಒಳಗೊಂಡಿದೆ. ನೆಲ ಬಾಂಬುಗಳ ವಿರುದ್ಧ ಹೋರಾಡಿದ ಜೋಡಿ ವಿಲಿಯಮ್ಸ್ ಅವರ ಭಾಷಣ ಎಲ್ಲ ಕಾಲಕ್ಕೂ ನಮ್ಮನ್ನು ಚಿಂತನೆಗೀಡು ಮಾಡುತ್ತದೆ. ಮಿಖಾಯಿಲ್ ಗೋರಬಚೇವ್ ಅವರ ಜಾಗತಿಕ ಪರಿಸರ ಪ್ರಜ್ಞೆ ಕುರಿತಾದ ಭಾಷಣವನ್ನು ಇದು ಒಳಗೊಂಡಿದೆ. ಅಂಕೋಲದಲ್ಲಿ ನಡೆದ ನಿರಂತರ ಗಣಿಗಾರಿಕೆಯ ದುರಂತ ಕಥನಗಳ ಕುರಿತು ಇಲ್ಲಿ ಚರ್ಚೆ ಇದೆ. ಪರಿಸರ ಸಂಸ್ಕೃತಿ ಮತ್ತು ಸಾಹಿತ್ಯ ಹೇಗೆ ಪರಸ್ಪರ ಪೂರಕವಾಗಿವೆ ಹಾಗೂ ಅವಲಂಬಿತವಾಗಿವೆ ಎಂದು ತಿಳಿಸುವುದೇ ಈ ಪ್ರತಿಯೊಬ್ಬರ ಉದ್ದೇಶ .