ಸಾಮಾನ್ಯವಾಗಿ ಸಾಹಿತ್ಯ ಎನ್ನುವ ವಾಕ್ಯ ರಾಗಂ ಅವರನ್ನು ಬಹುವಾಗಿ ಕಾಡಿದೆ ಸಾಹಿತ್ಯಕ್ಕಾಗಿ ನೋಬೆಲ್ ಶಾಂತಿ ಪ್ರಶಸ್ತಿ ಪಡೆದ ಹೆನ್ರಿ ಕಿಸಿಂಜರ್ “ನಾನು ಪ್ರಪಂಚದ ಶ್ರೀ ಸಾಮಾನ್ಯನ ಪ್ರತಿನಿಧಿ. ನನ್ನ ಸಾಹಿತ್ಯವೆಲ್ಲವೂ ಅದರ ಚಿತ್ರಣ. ಈ ಸಾಮಾನ್ಯ ಮನುಷ್ಯ ಕೇವಲ ಕಷ್ಟ ಪಡುವುದಿಲ್ಲ, ಹೋರಾಡುವುದಿಲ್ಲ, ಬದುಕುತ್ತಾನೆಯೂ ಕೂಡ” ಎಂದಿದ್ದಾರೆ. ಈ ಮಾತಿನಲ್ಲಿ ಅಪಾರ ನಂಬಿಕೆ ಇಟ್ಟಿರುವ ರಾಗಂ ಅವರು ಸಾಮಾನ್ಯನ ಕೊಡುಗೆ ಸಾಮಾನ್ಯವಾದುದಲ್ಲ, ಆದ್ದರಿಂದ ಸಾಹಿತ್ಯದ ಜೀವಾಳವಾದ ಸಾಮಾನ್ಯರನ್ನು ಸ್ಮರಿಸಿಕೊಳ್ಳುತ್ತಾ ಶ್ರೀಸಾಮಾನ್ಯರನ್ನ ಗಮನಿಸಿದ ಗೌರವಿಸಿದ ಸಾಹಿತಿಗಳ ಭಾಷಣಗಳನ್ನು ಕನ್ನಡಿಕರಿದ್ದಾರೆ.