ನೊಬೆಲ್ ಪ್ರಶಸ್ತಿ ವಿಜೇತರ ಭಾಷಣಗಳು

ನೊಬೆಲ್ ಪ್ರಶಸ್ತಿ ವಿಜೇತರ ಭಾಷಣಗಳು

ಭಾಷಾಂತರ
Apr 2025
ವಿಶ್ವ ಸಾಹಿತ್ಯದಲ್ಲಿ ಭಾಷಣ ಸಾಹಿತ್ಯಕ್ಕೂ ಅದರದೇ ಆದ ಒಂದು ಸ್ಥಾನ ಮತ್ತು ಗೌರವವಿದೆ. ಪ್ರಸ್ತುತ ಈ ಕೃತಿಯು ನೊಬೆಲ್ ಪ್ರಶಸ್ತಿ ವಿಜೇತರ ಭಾಷಣಗಳನ್ನು ಒಳಗೊಂಡಿದೆ. ನೊಬೆಲ್ ಪ್ರಶಸ್ತಿಯನ್ನು ಮಾನವ ಸಮಾಜದ ಒಳಿತಿಗಾಗಿ ದುಡಿದ ಬೇರೆ ಬೇರೆ ಕ್ಷೇತ್ರಗಳಲ್ಲಿಯ ಸಾಧಕರುಗಳಿಗೆ ನೀಡಲಾಗುತ್ತದೆ. ಇದು ಲೋಕಕ್ಕೆ ಗೊತ್ತಿರುವ ಸಂಗತಿ. ಆದರೆ, ಪ್ರಸ್ತುತ ಈ ಸಂಕಲನದಲ್ಲಿ ಅನ್ಯ ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ರಾಗಂ ಅವರು, ಕೇವಲ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಭಾಷಣಗಳನ್ನು ಇಲ್ಲಿ ಸಂಗ್ರಹಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಪ್ರಶಸ್ತಿಯನ್ನು ಪಡೆಯುವ ಸಂದರ್ಭದಲ್ಲಿಯೇ ಮಾಡಿದ ಸಾಧಕರ ಭಾಷಣಗಳನ್ನು ಇಲ್ಲಿ ಹೊಂದಿಸಿಡಲಾಗಿದೆ. ಕಣ್ವ ಪ್ರಕಾಶನದಿಂದ 2011ರಲ್ಲಿ ಪ್ರಕಟವಾದ ಈ ಕೃತಿಯು ಮತ್ತೆ 2021 ರಲ್ಲಿ ಪುಸ್ತಕ ಮಂಟಪದಿಂದ ಪ್ರಕಟಗೊಂಡು ಜನಪ್ರಿಯವಾಗಿದೆ.