ಮಹಾನ್ ಯೋಧರ ಮಹಾನ್ ಭಾಷಣಗಳು

ಮಹಾನ್ ಯೋಧರ ಮಹಾನ್ ಭಾಷಣಗಳು

ಭಾಷಾಂತರ
Apr 2025
ಅನುವಾದ ಮಾಲಿಕೆಯಾದ ಇದು ಮಹಾನ್ ಯೋದರ ಮಹಾನ್ ಭಾಷಣಗಳಾಗಿದ್ದು, ವಿಶ್ವದ ಇಪ್ಪತ್ತೊಂದು ಜನ ಯೋಧರ ಭಾಷಣದ ಟಿಪ್ಪಣಿಗಳಿವೆ. ಇದು ಎರಡನೇ ಮುದ್ರಣವನ್ನು ಕಂಡ ಹೆಗ್ಗಳಿಕೆಗೆ ಪಾತ್ರವಾದ ಕೃತಿ. ಇಲ್ಲಿ ಯೋಧರು ಎಂದಾಗ ರಣರಂಗಕ್ಕಿಳಿದು ಯುದ್ಧ ಮಾಡುವ ಸೈನಿಕರು ಮಾತ್ರವಲ್ಲ. ದೇಶದ ಪ್ರಧಾನಿಗಳು, ರಾಷ್ಟ್ರಾಧ್ಯಕ್ಷರು ಸೇರಿದ್ದಾರೆ. ರಾಷ್ಟ್ರಗಳ ಮುಖ್ಯಸ್ಥರು ಆಯಾ ದೇಶದ ಸೇನೆಯ ಮಹಾದಂಡನಾಯಕರಾಗಿರುತ್ತಾರೆ. ಇವರೆಲ್ಲ ನೇರವಾಗಿ ಯುದ್ಧ ರಂಗಕ್ಕೆ ಇಳಿಯುವುದಿಲ್ಲ. ಆದರೆ ಯುದ್ಧವನ್ನು ನಿರ್ದೇಶಿಸುತ್ತಾರೆ, ಸೇನೆಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ, ಹಾಗೂ ಸೈನಿಕರನ್ನು ವಿಜಯ ಸಾಧಿಸಲು ಪ್ರೋತ್ಸಾಹಿಸುತ್ತಾರೆ. ಈ ದೃಷ್ಟಿಯಿಂದ ಈ ಹೊತ್ತಿಗೆಯಲ್ಲಿ ಇರುವ ವ್ಯಕ್ತಿಗಳನ್ನು ಮಹಾನ್ ಯೋಧರು ಎಂದು ಪರಿಗಣಿಸಬಹುದು.