ಕವಿ ಮತ್ತು ಸಂತಾನ ಸಮಾಗಮವಾದಾಗ ಕವಿತೆಗೆ ಏನು ಅರ್ಥ? ಎಂಬ ಪ್ರಶ್ನೆಯನ್ನು ಕಾವ್ಯ ಕೃಷಿಕರಿಗೆ ಎಸೆಯುವ ಮೂಲಕ ರಾಗಂ ಪ್ರಸ್ತುತ ಸಂಕಲನದಲ್ಲಿ 2001 ಹಾಗೂ 2002 ಸಮುದ್ರ ತೀರದ ಭಟ್ಕಳದ ತಮ್ಮ ದಿನಗಳಿಗೆ ಕಾವ್ಯದ ಸಿಂಚನ ಮಾಡಿದ್ದಾರೆ. ಮತಾಂಧತೆಯ ಕುರುಡು ಕತ್ತಲೆಯಲ್ಲಿ ಅದೇ ತಾನೆ ಪ್ರಕ್ಷುಬ್ಧಗೊಂಡಿದ್ದ ಭಟ್ಕಳದ ನೆಲದಲ್ಲಿ ಕವಿಯನ್ನು ಕಾಡಿದ್ದು ಅಲ್ಲಿಯ ಮಲ್ಲಿಗೆ, ನೊರೆ ತುಂಬಿದ ಸಮುದ್ರದ ಅಲೆಗಳು ಮತ್ತು ವಿಷಾದ ಮೌನ. ಯಾರೂ ಯಾವುದನ್ನೂ ಹುಚ್ಚಾಗಿ ಪ್ರೀತಿಸದ ಹೊರತು ಅವನು ತನ್ನ ಕವಿತ್ವವನ್ನಾಗಲಿ, ಸಂತತ್ವವನ್ನಾಗಲಿ ಸಾಧಿಸಲಾಗದು. ಸಂತ ಈ ಜಗತ್ತಿನಿಂದ ಓಡಿ ಹೋದವನಲ್ಲ, ಬದಲಾಗಿ ಈ ಜಗತ್ತು ಹೋಗದ ಕಡೆಗೆ ಆತ ಹೋಗಿ ಬಂದವ. “ಕಾವ್ಯ ಶೋಧದ ದಾರಿ ಎನ್ನುವುದಾದರೆ, ಸಂತತ್ವವೂ ಅದೇ ಜಾಡಿನದು” ಎನ್ನುವ ವಿಚಾರದ ಪ್ರತಿಪಾದನೆಯಂತೆ ಇಲ್ಲಿಯ ಕವಿತೆಗಳಿವ