ಪರಮ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಶುಭಹಾರೈಕೆ ಹಾಗೂ ಡಾ. ಸಿಂಪಿ ಲಿಂಗಣ್ಣನವರ ಬೆನ್ನುಡಿಗಳೊಂದಿಗೆ, ರಾಗಂ ಹಾಗೂ ಗೆಳೆಯರ ಬಳಗದಿಂದ ಸ್ಥಾಪಿತ ಕಲಾಗಂಗಾಧರ ಪ್ರಕಾಶನ, ಚಡಚಣದಿಂದ ಪ್ರಕಟವಾದ ಈ ಕಾವ್ಯ ಸಂಕಲನವು 42 ಕವಿತೆಗಳ ಗುಚ್ಚವಾಗಿದ್ದು, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಣ ತಜ್ಞ ಪ್ರೊ. ಎನ್.ಜಿ ಕರೂರ ಅವರಿಂದ ಲೋಕಾರ್ಪಣೆಯಾಗಿದೆ. ಈ ಸಂಕಲನದ ಮಹತ್ವದ ರಚನೆ ಶ್ರೀ ಎಂ.ಆರ್.ಜಹಗೀದಾರ ಅವರ ನೆನಪಿನಲ್ಲಿ ಬರೆದ ಕವಿತೆ 'ಕ್ರೌಂಚದ ಕಣ್ಣೀರು'. ರಾಗಂ ಅವರ ಬಿ.ಎ ದ್ವಿತಿಯ ವರ್ಷದ ದಿನಗಳಲ್ಲಿ ಪ್ರಕಟವಾದ ಈ ಸಂಕಲನದ ಬಹುಪಾಲು ಕವಿತೆಗಳು ಹುಬ್ಬಳಿಯ 'ಪ್ರಜಾ ಜ್ಯೋತಿ' ಹಾಗೂ ಬೆಂಗಳೂರಿನಿಂದ ಪ್ರಕಟಗೊಳ್ಳುತ್ತಿದ್ದ 'ಪ್ರಜಾಮತ' ಪ್ರತಿಕೆಗಳಲ್ಲಿ ಪ್ರಕಟವಾದವುಗಳು.