1997ರಲ್ಲಿಯೇ ಸಿದ್ಧವಾಗಿದ್ದರೂ, ಮೂರು ವರ್ಷಗಳ ನಂತರ ಅಡವಿ ಪ್ರಕಾಶನ ಧಾರವಾಡದಿಂದ 2000ರಲ್ಲಿ ಪ್ರಕಟವಾದ, 41 ಕವಿತೆಗಳ ಈ ಸಂಕಲನದ ಮುನ್ನುಡಿಯನ್ನು ಡಾ. ಎಸ್.ಎಂ ವೃಷಭೇಂದ್ರ ಸ್ವಾಮಿಯವರು, ಬೆನ್ನುಡಿಯನ್ನು ಡಾ. ಕಮಲಾ ಹೆಮ್ಮಿಗೆಯವರು ಬರೆದಿದ್ದಾರೆ. ಗೇಯ ಸ್ವಭಾವದ ಬಹುಪಾಲು ಈ ಸಂಕಲನದ ಕವಿತೆಗಳು ಪ್ರೀತಿ, ಜೀವನ, ಹುಟ್ಟು, ಸಾವು ಹಾಗೂ ನಂಬಿಕೆಗಳೆಂಬ ಪಂಚದ್ರವ್ಯಗಳನ್ನು ವಿಷಯವಾಗಿಸಿಕೊಂಡು ರಚಿತವಾಗಿವೆ. 'ಅಕ್ಕ', 'ನನ್ನ ಕವನಗಳೇ ಹೀಗೆ ಸ್ವಾಮಿ, “ಬೇರು ಬಿಟ್ಟವರಲ್ಲ ನಾವು'ಗಳಂಥ ಕವನಗಳು ಭರವಸೆಯ ಲೇಖಕನೊಬ್ಬನ ಬರುವಿಕೆಯನ್ನು ಸೂಚಿಸುವಂತಿದ್ದರೆ, 'ನ-ನ್ನೂರ ಧಾರವಾಡ', 'ಯಾರು ಬಲ್ಲರು?' ಹಾಗೂ ಕವಿತೆಗಳು ಅನೇಕ ಕಲಾವಿದರ ಕಂಠದ ಮೂಲಕ ಆಕಾಶವಾಣಿ ಧಾರವಾಡದಿಂದ ಪ್ರಸಾರವಾಗಿದೆ ಈ ಕಾವ್ಯ ಸಂಕಲನ 2008ರಲ್ಲಿ ಪುನರ್ ಮುದ್ರಣ ಕಂಡಿದೆ.