ಗಲ್ಲು ಗಡಿಪಾರು

ಗಲ್ಲು ಗಡಿಪಾರು

ಅಂಕಣ ಬರಹ
Apr 2025
ರಾಗಂರ ಬೃಹತ್‌ ಕೃತಿಗಳಲ್ಲಿ ಇದೂ ಒಂದು. 510 ಪುಟಗಳ ವ್ಯಾಪ್ತಿಯ ಈ ಕೃತಿಯು ಹಿಂದಿನ ನಾಲ್ಕು ಕಾವ್ಯಕ್ಕೆ ಉರುಳುಗಳನ್ನು ಒಳಗೊಂಡಿದೆ. ಅಂಕಣ ಸಾಹಿತ್ಯವಾಗಿ ಗಮನ ಸೆಳೆದಿದ್ದ ಈ ನಾಲ್ಕು ಭಾಗಗಳು ಒಂದೆಡೆ ಸೇರುವ ಅವಶ್ಯಕತೆ ಇತ್ತು ಸಾವಿರಾರು ವರ್ಷಗಳಷ್ಟು ದೀರ್ಘವಾದ ನೂರು ದೇಶಗಳ ನೆತ್ತರದ ಮಟಗಳ ಅವಲೋಕನವನ್ನು ಇಲ್ಲಿ ಮಾಡಲಾಗಿದೆ. ಇತಿಹಾಸ ಸಾಕ್ಷಿಯಾಗಿರುವಂತೆ ನಾಗರಿಕತೆ ಭೌತಿಕವಾಗಿ ನಿರಾಳವಾದಷ್ಟು ಆಳವಾಗುತ್ತಿರುತ್ತದೆ ಅನಾಗರಿಕತೆಯ ಭಾವನಾತ್ಮಕ ನೆಲೆ ಎನ್ನುತ್ತಾರೆ ರಾಗ, ಈ ಕೃತಿಯಲ್ಲಿ ನೆತ್ತರಲ್ಲಿ ನುಡಿ ಮೂಡಿಸಿದವರ ನಡಿಗೆಯ ಜಾಡನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಲಾಗಿದೆ