ಭಾರತದ ಹೆಮ್ಮೆಯ ಮತ್ತು ಅಪರೂಪದ ರಾಷ್ಟ್ರಪತಿಯಾದ ಪ್ರೊ, ಎಪಿಜೆ ಅಬ್ದುಲ್ ಕಲಾಂ ಅವರಿಗೆ ಅರ್ಪಣೆಯಾದ ಮಹತ್ವದ ಕೃತಿ. ಇದರ ಮುನ್ನಡಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಡಾ. ವೆಂಕಟಗಿರಿ ದಳವಾಯಿ ಅವರು ಬರೆದಿದ್ದಾರೆ. ರಾಗಂ ಅವರ ಬರಹ ಕುರಿತು ಅವರು ದಾಖಲಿಸಿರುವ ಕೆಲವು ಸಾಲುಗಳು ಇಲ್ಲಿ ಚರ್ಚೆಗೆ ಯೋಗ್ಯ - “ರಾಗಂ ನಿರಂತರವಾಗಿ ಯೋಚಿಸುವ ಬರೆಯುವ ದೈತ್ಯ ಶಕ್ತಿಯನ್ನು ಪಡೆದುಕೊಂಡಿದ್ದಾರೆ. ರಾಗಂರ ವಿಷಯಗಳ ಆಯ್ಕೆಯೇ ಭಿನ್ನ, ಅವರ ಬರಹದ ಸ್ಥಾಯಿವಸ್ತು ಎಂದರೆ ಸಾವು. ಬದುಕಿನ ಅರ್ಥಗಳನ್ನು ವೈಯಕ್ತಿಕ ನೆಲೆಯಲ್ಲಿ ಹುಡುಕಲು ಆರಂಭಿಸಿ, ವಿಶ್ವಾತ್ಮಕ ನೆಲೆಗೆ ತಲುಪುವ ಇಲ್ಲಿನ ಬರಹದ ಒತ್ತಾಸೆ ಅನನ್ಯವಾಗಿದೆ. ನವ ತರುಣರಿಗೆ, ಪಾಶ್ಚಾತ್ಯ ಸಾಹಿತ್ಯದ ಅಧ್ಯಯನ ಪ್ರಿಯರಿಗೆ, ಆಧುನಿಕ ಜಗತ್ತಿನ ಬಿಕ್ಕಟ್ಟುಗಳನ್ನು, ದುರಂತಗಳನ್ನು, ಪುಟ್ಟ ಪುಟ್ಟ ಲೇಖನಗಳಲ್ಲಿ ತೋರಿಸಿದ ಪ್ರಾಯೋಗಿಕ ಕಾವ್ಯ ವಿಮರ್ಶೆಯ ರೀತಿಯಲ್ಲಿ ರಾಗಂ ಅವರ ಕಾವ್ಯಕ್ಕೆ ಉರುಳು ಭಾಗ 4 ಪ್ರಕಟವಾಗಿದೆ.