ದಂಡಿ' ಅಂತಹ ಒಂದು ಅಪರೂಪದ ಪ್ರಯೋಗಶೀಲ ಕಥಾನಕ, ಶ್ರೀ ಶಾಂತಾರಾಮ ನಾಯಕರು ಗುರುತಿಸಿದಂತೆ 'ದಂಡಿ ಸಾಮಾನ್ಯರ ಅಸಾಮಾನ್ಯ ಹೋರಾಟ'ದ ಚಾರಿತ್ರಿಕ ದಾಖಲೆ. ಕರಾವಳಿ ತೀರದ ಜನರ ಬದುಕು-ಬವಣೆಗಳ ಜೊತೆಯಲ್ಲಿ ಸೃಷ್ಠಿಯಾಗುವ ಪಾತ್ರ ಪ್ರಪಂಚ, ಸ್ವಾತಂತ್ರ್ಯ ಹೋರಾಟದ ಹಲವು ಸಾಧ್ಯತೆಗಳಿಗೆ ಒಡ್ಡಿಕೊಂಡ ಕುತೂಹಲದ ಕಥೆಯಾಗಿ ಅರಳಿಕೊಳ್ಳುತ್ತ ಸಾಗುತ್ತದೆ. ಕರಾವಳಿ ತೀರದ ಸಮೃದ್ಧ ಸಾಮಾಜಿ-ಸಾಂಸ್ಕೃತಿಕ ಐತಿಹ್ಯಗಳು, ಶೃದ್ಧೆ-ನಂಬಿಕೆಗಳು ಗಾಂಧಿ ಆಲೋಚನೆಗಳನ್ನು ಪಡಿ ಮಾಡಿಸಿಕೊಂಡು ಜನಾಂದೋಲನದ ಸ್ವರೂಪ ಪಡೆಯುವ ಐತಿಹಾಸಿಕ ವಿದ್ಯಮಾನವೊಂದನ್ನು 'ದಂಡಿ' ಕಥೆಯಾಗಿ ಹೆಣೆದ ರಾಗಂರ ಕಥನ ಕೌಶಲ್ಯ ಬೆರಗು ಹುಟ್ಟಿಸುತ್ತದೆ. ಇಲ್ಲಿನ ಇಪ್ಪತ್ತೈದು ಲೇಖಕರ ವಿದ್ವತ್‌ಪೂರ್ಣವಾದ ಲೇಖನಗಳನ್ನು ಸಂಕಲಿಸಿ ಸಹೃದಯಿ ಓದುಗರ ಕೈಗಟ್ಟಿದ್ದಾರೆ.