ಪ್ರೊ. ಚಂದ್ರಶೇಖರ ಹೆಗಡೆ ಮತ್ತು ದಿವಂಗತ ಡಾ. ನಿಂಗಮಾರಯ್ಯ ಅವರ ರಾಗಂ ಕುರಿತ ಸಂಪಾದನಾ ಕೃತಿಯಾಗಿದೆ. “ಬರಹವೆಂಬ ನಿತ್ಯ ದ್ಯಾನ' ರಾಗಂ ಅವರ ಅತ್ಯಂತ ಜನಪ್ರಿಯವಾದ ವಿಮರ್ಶ ಸಂಕಲನವಾಗಿದೆ ಇಲ್ಲಿ ಒಟ್ಟು 54 ಲೇಖನಗಳಿವೆ. ಈ ಕೃತಿ ಪರಂಪರೆ ಹಾಗೂ ಸಮಕಾಲೀನ ಕವಿ ಲೇಖಕರ ಸಾಹಿತ್ಯದೊಂದಿಗೆ ಮುಖಾಮುಖಿಯಾಗಿದೆ. ಒಂದು ನಿರ್ದಿಷ್ಟ ಪ್ರಕಾರದ ಸಾಹಿತ್ಯವನ್ನು ಮಾತ್ರ ಆಧರಿಸಿ ಅವಲೋಕಿಸದೆ ವಿಭಿನ್ನ ಪ್ರಕಾರದ ಕೃತಿಗಳನ್ನ ಪರಾಮರ್ಶಿಸಿ ನಿಖನಕ್ಕೊಳಪಡಿಸಿದ್ದಾರೆ. ಕಥೆ, ಕವನ, ಕಾದಂಬರಿ, ಬಿಡಿ ಲೇಖನಗಳು ಸೇರಿದಂತೆ ವೈವಿಧ್ಯಮಯ ಬರಹಗಳು ಇಲ್ಲಿವೆ.