ಗಾಂಧಿ ಮತ್ತು ಗೂಂಡಾ

ಗಾಂಧಿ ಮತ್ತು ಗೂಂಡಾ

ನಾಟಕ
Apr 2025
ಈ ನಾಟಕವು 'ಗಾಂಧಿ ಮತ್ತು ಗೂಂಡಾ'ನ ಚಿಂತನೆಗಳಿಗೆ ಇರುವ ಸಾಮ್ಯತೆ ಮತ್ತು ವೈರುಧ್ಯಗಳನ್ನ ತೆರೆದಿಡುತ್ತದೆ. ಪೊಲೀಸರಿಂದ ತಪ್ಪಿಸಿಕೊಂಡು ಬಂದ ಕಳ್ಳ ಗಾಂಧಿ ಪ್ರತಿಮೆ ಹಿಂದಿ ಅಡಗಿ ಕುಳಿತುಕೊಳ್ಳುವನು. ಆಗ ಇವನ ಅಸತ್ಯ, ಮೋಸ, ಕಳ್ಳತನ ನೋಡಿ ಪ್ರತಿಮೆಗೆ ಜೀವ ಬರುತ್ತದೆ, ನೀನು ಮಾಡುವುದು ತಪ್ಪು ಎಂದು ಗಾಂಧಿ ಅವರಿಗೆ ಬುದ್ಧಿ ಹೇಳುತ್ತಾನೆ. ಗೂಂಡಾ ಅದನ್ನು ತಿರಸ್ಕರಿಸುತ್ತಾ ನನ್ನದೇನು ತಪ್ಪಿಲ್ಲ. ಇದು ಅನಿವಾರ್ಯ ಹಾಗೂ ಇಂದಿನ ಅಗತ್ಯತೆ ಎನ್ನುತ್ತಾ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುತ್ತಾನೆ. ಈ ಕಳ್ಳ ಮತ್ತು ಗಾಂಧೀಜಿ ಸಂವಾದವೇ ನಾಟಕದ ಜೀವ ದ್ರವ್ಯವಾಗಿದೆ. ಕಳ್ಳ ಅವನೊಬ್ಬನನ್ನ ಪ್ರತಿನಿಧಿಸುತ್ತಿಲ್ಲ ಇಡೀ ಸಮಾಜವನ್ನು ಪ್ರತಿನಿಧಿಸುತ್ತಿದ್ದಾನೆ, ಜನ ಸಮುದಾಯವನ್ನು ಸಂಕೇತಿಸುತ್ತಿದ್ದಾನೆ.