'ಗಾಂಧಿ' ರಾಗಂ ರಾಗಂ ಅಧ್ಯಯನ ಅತ್ಯಂತ ಆಳವಾದದ್ದು ಹಾಗೂ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಗಾಂಧಿ ಬದುಕಿನ ದುರಂತ ಕಥೆ ನಾಟಕದ ಕಥಾವಸ್ತು. ಗಾಂಧಿ ಜೀವನದ ಕೊನೆಯ ಆರು ತಿಂಗಳ ಸಂಕಟ, ತಳಮಳ, ಅಸಹಾಯಕತೆ, ಜಿಗುಪ್ಪೆ, ತಿರಸ್ಕಾರ, ನೋವುಗಳು ಇಲ್ಲಿ ಚಿತ್ರಿತವಾಗಿವೆ. ಸ್ವತಂತ್ರ ನಂತರ ಕಸ್ತೂರಿ ಬಾ ಸಾವು, ಮಗನ ಚಿಂತೆ, ರಾಜಕೀಯದಿಂದ ದೂರ ಉಳಿಯುವ ಪರಿಸ್ಥಿತಿ, ದೇಶ ವಿಭಜನೆಯ ನಂತರ ಬದಲಾದ ಸಾಮಾಜಿಕ ಮತ್ತು ರಾಜಕೀಯ ಸಂದರ್ಭ, ಗಾಂಧಿ ಅನುಭವಿಸಿದ ಯಾತನಾಮಯ ಬದುಕಿನ ಚಿತ್ರಣವನ್ನು ಅತ್ಯಂತ ಜವಾಬ್ದಾರಿಯುತವಾಗಿ ಕಟ್ಟಿಕೊಡುತ್ತದೆ. ಈ ನಾಟಕ ಜೆ.ಕೆ ನದಾಫ್ ನಿರ್ದೇಶನದಲ್ಲಿ ಅಭಿನವ ರಂಗ ಆರಾಧನಾ ತಂಡದ 22 ಕಲಾವಿದರು ನಾಡಿನ 9 ಕಡೆಗಳಲ್ಲಿ ಈ 'ಗಾಂಧಿ ಮತ್ತು ಗೂಂಡಾ' ನಾಟಕವನ್ನು ಪ್ರದರ್ಶಿಸಿರುವುದು ಹೆಮ್ಮೆಯ ಸಂಗತಿ.