ಜಗದ್ವಂದ್ಯ ಭಾರತಂ

ಜಗದ್ವಂದ್ಯ ಭಾರತಂ

ಕಾದಂಬರಿ
Apr 2025
‘ಜಗದ್ವಂದ್ಯ ಭಾರತಂ’ ಭಾರತದ ಬಾವುಟದ ಕಥೆಯನ್ನು ಹೇಳುವ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ಏಕೈಕ ಕಾದಂಬರಿ. ರಾಗಂ ಅವರ ಈ ಜಗದ್ವಂದ್ಯ ಭಾರತಂ, ಪ್ರತಿಷ್ಠಿತ ಶಿವಮೊಗ್ಗೆಯ ಕರ್ನಾಟಕ ಸಂಘದ 2019ನೇ ಸಾಲಿನ 'ಕುವೆಂಪು ಕಾದಂಬರಿ' ಪ್ರಶಸ್ತಿಗೂ ಈ ಕೃತಿ ಭಾಜನವಾಗಿದೆ. ಕನ್ನಡದಲ್ಲಿ ಎರಡು ಮುದ್ರಣಗಳನ್ನು ಕಾಣುವುದರೊಂದಿಗೆ ಇಂಗ್ಲಿಷ್ ಭಾಷೆಗೂ ಈ ಕಾದಂಬರಿ ಭಾಷಾಂತರಗೊಂಡಿದೆ. ದೇಶದ ಸ್ವಾತಂತ್ರ್ಯ, ದೇಶ ವಿಭಜನೆ, ಗಾಂಧೀಜಿಯ ಹತ್ಯೆ ಹಾಗೂ ಭಾರತದ ಬಾವುಟದ ರಚನೆ ಈ ನಾಲ್ಕು ಸಂಗತಿಗಳ ಮಧ್ಯದಿಂದ ಹುಟ್ಟುವ ಈ ಕಾದಂಬರಿ ಮುಂಬೈನ ಗಲಭೆಗಳಿಂದ ಪ್ರಾರಂಭವಾಗಿ, ಅಲ್ಲಿಂದ ಹೊರಟ ನಾಯಕ ಗೋವಾದ ಮೂಲಕ ಕರ್ನಾಟಕದ ಧಾರವಾಡ ಪಕ್ಕದ 'ಬಾವುಟಗಳ ಹಳ್ಳಿ' ಎಂದೆ ಪ್ರಸಿದ್ಧವಾದ 'ಗರಗ'ಕ್ಕೆ ಬಂದು ಮುಟ್ಟುವುದರ ಮೂಲಕ ಕಾದಂಬರಿ ಮುಗಿಯುತ್ತದೆ. ರಾಜಕಾರಣ, ಅಧಿಕಾರ, ಮತಿಯ ಗಲಭೆ ಈ ಎಲ್ಲ ರೋಚಕ ಸಂಗತಿಗಳೊಂದಿಗೆ ಭಾರತದ ಬಾವುಟದ ಪರಿಕಲ್ಪನೆ ನಾಗರಿಕತೆಯ ಕಾಲದಿಂದ ಪ್ರಾರಂಭವಾಗಿ ಮಹಾಕಾವ್ಯ ಪುರಾಣ, ಗುಪ್ತರ ಕಾಲ, ಮಧ್ಯಯುಗೀಯ ಮುಸ್ಲಿಂ ಕಾಲ, ಹೊಸಹಾತು ಶಾಹಿ ಸಂದರ್ಭಗಳಿಂದ ವರ್ತಮಾನದ ಭಾರತದವರೆಗೂ ದೇಶದ ಬಾವುಟ ಹೇಗೆ ಬಣ್ಣ ಹಾಗೂ ವಿನ್ಯಾಸ ಗಳಲ್ಲಿ ಬದಲಾವಣೆಗೊಳ್ಳುತ್ತಾ ಬಂದಿತು ಎನ್ನುವ ಚರಿತ್ರೆಯನ್ನು ಕೂಡ ಇಲ್ಲಿ ಚರ್ಚಿಸಲಾಗಿದೆ.

More from ಕಾದಂಬರಿ