ರಾಗಂ ಅವರ 'ದಿ ಮೇಕಿಂಗ್ ಆಫ್ ದಂಡಿ

ರಾಗಂ ಅವರ 'ದಿ ಮೇಕಿಂಗ್ ಆಫ್ ದಂಡಿ

ಸಿನಿಮಾ ಸಾಹಿತ್ಯ
Apr 2025
ರಾಗಂ ಅವರ ಮಹತ್ವದ ಕಾದಂಬರಿ 'ದಂಡಿ' ಕೃತಿಯಾಗಿ ಎರಡು ಮುದ್ರಣಗಳನ್ನು ಕಂಡಿತ್ತು. ಆನಂತರ ಅದು ಚಲನಚಿತ್ರವಾಗಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡನೆಯ ಸ್ಥಾನವನ್ನು ಪಡೆದು ರಾಜ್ಯಪಾಲರಿಂದ ಮನ್ನಣೆಗೆ ಪಾತ್ರವಾದ ಮೇಲೆ, ಅದರ ಬೇಡಿಕೆಯನ್ನು ಗಮನದಲ್ಲಿ ಇರಿಸಿಕೊಂಡು 'ದ ಮೇಕಿಂಗ್ ಆಫ್ ದಂಡಿ'ಯನ್ನು ಪ್ರಕಟಿಸಲಾಯಿತು. ಪ್ರಸ್ತುತ ಈ ಕೃತಿಯಲ್ಲಿ ಮೂಲ ಕಾದಂಬರಿಯೊಂದಿಗೆ, ಕಾದಂಬರಿಯೊಂದು ಸಿನಿಮಾಕ್ಕೆ ಅಳವಡಿಸಲ್ಪಟ್ಟ ಮೇಲೆ ದೃಶ್ಯಗಳಾಗಿ ಬದಲಾದ ನಮೂನೆಗಳನ್ನು, ದಂಡಿ ಸಿನಿಮಾ ಆದ ಮೇಲೆ ಅದಕ್ಕೆ ಬಂದ ಪ್ರಶಸ್ತಿ ಪತ್ರಿಕಾ ಪ್ರತಿಕ್ರಿಯೆಗಳನ್ನು, ಕಾದಂಬರಿಗೆ ಸ್ಪಂದಿಸಿದ ವಿಮರ್ಶಕರ ಆಯ್ದ ಸಾಲುಗಳನ್ನು, ದಂಡಿ ಚಲನಚಿತ್ರದ ಹಾಡುಗಳನ್ನು, ಕಲಾವಿದರ ಹಾಗೂ ತಂತ್ರಜ್ಞರ ವಿವರಗಳನ್ನು ಸವಿಸ್ತಾರವಾಗಿ ಸೇರಿಸಿ 'ದಿ ಮೇಕಿಂಗ್ ಆಫ್ ದಂಡಿ'ಯನ್ನು ಪ್ರಕಟಿಸಲಾಗಿದೆ,