ಇದು ಆಗ್ರಾದ ಕರೆಂಟ್ ಪಬ್ಲಿಕೇಶನ್ನಿಂದ ಪ್ರಕಟವಾದ ರಾಗಂ ಅವರ ಸಂಶೋಧನಾ ಪ್ರಬಂಧದ ಪುಸ್ತಕ ರೂಪ. ಈ ಕೃತಿಯನ್ನು ಅವರು ತಮ್ಮ ತಂದೆತಾಯಿ ಹಾಗೂ ಸ್ನೇಹಿತರಿಗೆ ಅರ್ಪಿಸಿದ್ದು, ಕೃತಿಯ ಮುನ್ನುಡಿಯನ್ನು ಭಾರತದ ಶ್ರೇಷ್ಠ ಭಾಷಾಂತರಕಾರರಾದ ಪ್ರೊ. ಜಿ. ಬಿ. ಸಜ್ಜನ್ ಅವರು ಬರೆದಿದ್ದಾರೆ. ಬೆನ್ನುಡಿಯಲ್ಲಿ ಭಾರತದ ಮತ್ತೋರ್ವ ಚಿಂತಕರಾದ ಪ್ರೊ. ಜೆ. ಬಿ. ಪರಾಂಜಪೆ, ಪ್ರೊ ಸಿ. ಆರ್. ವಾಯ್ ಇದ್ದಾರೆ. ಒಟ್ಟು 229 ಪುಟಗಳ ಈ ಕೃತಿಯು ಇಂಗ್ಲಿಷ್‌ನಲ್ಲಿ ಇದೆ. ಕೃತಿಯಲ್ಲಿ ಮುಖ್ಯವಾಗಿ ಶ್ರೇಷ್ಠ ಪತ್ರಕರ್ತ ಸಿನಿಮಾ ನಿರ್ದೇಶಕರಾಗಿದ್ದ ಅಬ್ಬಾಸರ ಸಾಹಿತ್ಯಕ ಸಾಧನೆಗಳ ಮೇಲೆ ಬೆಳಕು ಚೆಲ್ಲಲಾಗಿದೆ.